ಲಕ್ನೋ, ಮಾ 04 (DaijiworldNews/MS): ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ "ಮತ್ತೆ ಅವರ ಮಠಕ್ಕೆ" ಕಳುಹಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಅವರಿಗೆ “ಜಾತಿವಾದಿ” ಮನಸ್ಥಿತಿ ಇದೆ ಎಂದು ಆರೋಪಿಸಿದ ಅವರು ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರನ್ನು ಪ್ರತಿ ಹಂತದಲ್ಲೂ ಕಡೆಗಣಿಸಿದ್ದಾರೆ . ಹೀಗಾಗಿಈ ಬಾರಿ ಮಾಯಾವತಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಯೋಗಿಜಿಯನ್ನು ಅವರ ಮಠಕ್ಕೆ, ಅವರ ಕುಟುಂಬಕ್ಕೆ ಮರಳಿ ಕಳುಹಿಸಿ. ಅವರು ದೊಡ್ಡ ಭರವಸೆಗಳನ್ನು ನೀಡಿದ್ದರು ಆದರೆ ಅನುಷ್ಠಾನ ಮಾಡಿಲ್ಲ. ಅವರ ಜಾತಿವಾದಿ ಸಂಕುಚಿತ ಮನೋಭಾವದಿಂದಾಗಿ ಅವರು ಎಸ್ಸಿ/ಎಸ್ಟಿ ಸಮುದಾಯ ಮತ್ತು ಅತ್ಯಂತ ಹಿಂದುಳಿದ ಜನರ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ
ಬಿಎಸ್ ಪಿ ಚುನವಣಾ ಸಭೆಯಲ್ಲಿ ಮಾತನಾಡಿದ ಅವರು, ಎಕ್ಸಿಟ್ ಪೋಲ್ಸ್ ಸಮೀಕ್ಷೆಯಲ್ಲಿ ಬಿಜೆಪಿ ಪರ ವರದಿ ನೀಡಿರುವುದಕ್ಕೆ ಮಾಧ್ಯಮಗಳ ವಿರುದ್ಧ ಮಾಯಾವತಿ ಕಿಡಿ ಕಾರಿದರು. ಈ ಜನಾಭಿಪ್ರಾಯ ಮತ್ತು ಅದರ ಉತ್ಸಾಹವನ್ನು ನೋಡಿದರೆ, ನೀವು ಬಿಎಸ್ಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ನಿಮ್ಮ 'ಬೆಹೆನ್ಜಿ'ಯನ್ನು ಐದನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲು ಹಾಗೂ ಯೋಗಿಯನ್ನು ವಾಪಸ್ ಅವರ ಮಠಕ್ಕೆ, ಕಳುಹಿಸಲು ನೀವು ಸಿದ್ಧರಾಗಿರುವಿರಿ ಎಂದು ನಾನು ಹೇಳಬಲ್ಲೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.