ಬೆಂಗಳೂರು, ಮಾ 04 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಚೊಚ್ಚಲ ಬಜೆಟ್ ಅನ್ನು ಮಂಡಿಸುತ್ತಿದ್ದು ಮೇಕೆದಾಟು ಯೋಜನೆಗೆ 1ಸಾವಿರ ಕೋಟಿ ರೂ. ಹಾಗೂ ಎತ್ತಿನ ಹೊಳೆ ಯೋಜನೆಗ 3 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ಫೋಷಿಸಿದ್ದಾರೆ.
ಮೇಕೆದಾಟು ಯೋಜನೆಗೆ 1000 ಕೋಟಿ ರೂ., ಎತ್ತಿನ ಹೊಳೆ ಯೋಜನೆಗ 3000 ಕೋಟಿ ರೂ., ಭದ್ರಮೇಲ್ದಂಡೆ 3000 ಕೋಟಿ ರೂ., ಕಳಸಾಬಂಡೂರಿ ನಾಲ ತೀರುವುದು ಯೋಜನೆ 1000 ಕೋಟಿ ರೂ., ಕೃಷ್ಣ ಮೇಲ್ ದಂಡೆ 3 ನೇ ಹಂತ 5000 ಕೋಟಿ ರೂ ಮೀಸಲಿಡಲು ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ.
ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಪ್ರಥಮ ಹಂತದ ಕಾಮಗಾರಿಗಳನ್ನು ಪ್ರಸಕ್ತ ಸಾಳಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗುವುದು. ಯೋಜನೆಯ ಎರಡನೇ ಹಂತದ 260 ಕಿ.ಮೀ ಉತ್ತದ ಗುರುತ್ವ ಕಾಲುವೆ ಟಿ.ಜಿ ಹಳ್ಳಿ-ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಲು ಕ್ರಮ ಜರುಗಿಸಲು ಹಾಗೂ ಯೋಜನೆಯ ಉಳಿಕೆ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.