ಬೆಂಗಳೂರು, ಮಾ 04 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಚೊಚ್ಚಲ ಬಜೆಟ್ ಮಂಡನೆಗೆ ಅನುಮೋದನೆಯನ್ನು ನೀಡಲಾಗಿದ್ದು, ವಿಧಾನಸಭೆಗೆ ಆಗಮಿಸಿದಂತತಮ್ಮ ಚೊಚ್ಚಲ ಬಜೆಟ್ ಮಂಡಿಸೋದಕ್ಕೆ ಆರಂಭಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಲು ಆರಂಭಿಸಿದ್ದು, ಇದಕ್ಕೂ ಮುನ್ನಾ ಆರ್ ಟಿ ನಗರದ ಶ್ರೀಕಂಠೇಶ್ವರ ಹಾಗೂ ಬಾಲಬ್ರೂಹಿಯಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದು, ಆ ಬಳಿಕ ಅವರ ಆರ್ ಟಿ ನಗರದ ನಿವಾಸದಲ್ಲಿ ಹಣಕಾಸ ಇಲಾಖೆಯ ಅಧಿಕಾರಿಗಳು ಸಿಎಂಗೆ 2022-23ನೇ ಸಾಲಿನ ಬಜೆಟ್ ಪ್ರತಿಯನ್ನು ಹಸ್ತಾಂತರಿಸಿದರು.
ಇನ್ನು ವಿಧಾನಸೌಧದಲ್ಲಿ 12.10ಕ್ಕೆ ನಿಗದಿಯಾಗಿದ್ದಂತ ಬಜೆಟ್ ಮುನ್ನಾದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಡೆಸಿ, ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಅನುಮೋದನೆಯನ್ನು ಪಡೆದಿದ್ದಾರೆ.