ನವದೆಹಲಿ, ಮಾ.03 (DaijiworldNews/SM): ಉಕ್ರೇನ್ ನಲ್ಲಿ ಯುದ್ಧ ಆರಂಭಗೊಂಡ ಬಳಿಕದಿಂದ ಇಲ್ಲಿಯ ತನಕ ಸುಮಾರು 18 ಸಾವಿರ ಭಾರತೀಯರನ್ನು ಕರೆ ತರಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಕೀವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೊದಲ ಮುನ್ಸೂಚನೆ ನೀಡಿದ ಬಳಿಕ ಕಾರ್ಯಾಚರಣೆ ಆರಂಭಗೊಂಡಿದ್ದು, ಇಲ್ಲಿಯ ತನಕ ಸುಮಾರು ಹದಿನೆಂಟು ಸಾವಿರ ಭಾರತೀಯರು ಕೀವ್ ನಗರವನ್ನು ತೊರೆದಿದ್ದಾರೆ. ಇನ್ನು ಭಾರತೀಯರನ್ನು ಕರೆ ತರುವ ಕಾರ್ಯಾಚರಣೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಭಾರತೀಯ ವಿಮಾನಯಾನ ಕಾರ್ಯೋನ್ಮುಖಗೊಂಡಿದೆ. ಈಗಾಗಲೇ ಮುಂದಿನ 24 ಗಂಟೆಗಳ ಕಾರ್ಯಾಚರಣೆ ಸಿದ್ಧಗೊಂಡಿದೆ ಎಂದು ಇಲಾಣೆ ಮಾಹಿತಿ ನೀಡಿದೆ.
ಆಪರೇಷನ್ ಗಂಗಾದಡಿಯಲ್ಲಿ ಇಲ್ಲಿಯ ತನಕ 6400 ಮಂದಿಯನ್ನು ಕರೆ ತರಲಾಗಿದೆ. ಮುಂದಿನ 24 ಗಂಟೆಗೆ 18 ವಿಮಾನಗಳು ನಿಗದಿಯಾಗಿದೆ. ಇಲ್ಲಿಯ ತನಕ ಒಟ್ಟು 30 ವಿಮಾನಗಳು ಆಪರೇಷನ್ ಗಂಗಾದಲ್ಲಿ ಭಾಗಿಯಾಗಿವೆ ಎಂದು ಮಾಹಿತಿ ಲಭಿಸಿದೆ.