ಮೈಸೂರು, ಮಾ 03 (DaijiworldNews/HR): ಕರ್ನಾಟಕದ ಅನೇಕ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆಯ ನೋವು ಇನ್ನೂ ಮಾಸಿಲ್ಲ. ಇಂತಹ ಸಮಯದಲ್ಲಿ ಕಾಂಗ್ರೆಸ್ನವರು ಪಾದಯಾತ್ರೆ ಹೆಸರಲ್ಲಿ ಮೋಜು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜನವರಿಯಲ್ಲಿ ಪಾದಯಾತ್ರೆ ಮೂಲಕ ಕೊರೊನಾ ಹಬ್ಬಿಸಿದ್ದ ಕಾಂಗ್ರೆಸ್ ನವರು ಈಗ ಮತ್ತೆ ಶುರು ಮಾಡಿದ್ದಾರೆ. ಯುದ್ಧಭೂಮಿಯಲ್ಲಿ ಸಂಕಷ್ಟದಲ್ಲಿರುವ ಭಾರತೀಯರು ಇವರ ನೆನಪಿಗೆ ಬರುತ್ತಿಲ್ಲ. ಪಾದಯಾತ್ರೆ ಹೆಸರಲ್ಲಿ ಒಬ್ಬಟ್ಟು ಊಟ, ದಾರಿಯುದ್ದಕ್ಕೂ ಎಳನೀರು, ಪಾಯಸ, ಮಜ್ಜಿಗೆ, ಡೋಲು, ತಮಟೆ, ಸಿದ್ದರಾಮಯ್ಯ ಅವರ ನೃತ್ಯ ಹೀಗೆ ನೋವಿನ ನಡುವೆಯೂ ಸಂಭ್ರಮಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪಾದಯಾತ್ರೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಂದ ಹಿಡಿದು ಹೈಕೋರ್ಟ್ ನ್ಯಾಯಾಧೀಶರವರೆಗೆ ಎಲ್ಲರಿಗೂ ಸಮಸ್ಯೆ ಆಗಿದ್ದು, ಬೆಂಗಳೂರಿನ ಜನರು ಶಾಪ ಹಾಕುತ್ತಿದ್ದಾರೆ ಎಂದರು.