ನವದೆಹಲಿ, ಮಾ 03 (DaijiworldNews/MS): ಭಾರತೀಯ ಪೊಲೀಸ್ ಸೇವೆಯ (IPS) ಅಧಿಕಾರಿಯೊಬ್ಬರು ಟ್ವೀಟರ್ ನಲ್ಲಿ ಮಾಡಿದ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸಿ ,ಗಮನ ಸೆಳೆಯುತ್ತಿದೆ.
ಚೆಂಗಲ್ಪೇಟೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪಿ ಅರವಿಂದನ್ ಅವರು ಮತ್ತೋರ್ವ ಐಪಿಎಸ್ ಅಧಿಕಾರಿಯೊಂದಿಗಿರುವ ಪೋಟೋ ಶೇರ್ ಮಾಡಿದ್ದಾರೆ. ಇಷ್ಟೇ ಆಗಿದ್ರೆ ಈ ಪೋಟೋ ನೆಟ್ಟಿಗರ ಗಮನ ಸೆಳೆಯುತ್ತಿರಲಿಲ್ಲ. ಪಿ ಅರವಿಂದನ್ ಅವರು "ತಮಿಳುನಾಡು ಪೊಲೀಸರು ದೆಹಲಿ ಪೊಲೀಸರನ್ನು ಭೇಟಿಯಾದಾಗ " ಎಂಬ ಶೀರ್ಷಿಕೆ ನೀಡಿದ್ದಾರೆ. ಇದರಲ್ಲೂ ಒಂದು ವಿಶೇಷ ಇದೆ. ಇವರಿಬ್ಬರೂ ಅವಳಿ ಸಹೋದರರಾಗಿದ್ದು ಇಬ್ಬರೂ ಅಧಿಕಾರಿಗಳೂ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಿ. ಅಭಿನಂದನ್ (ಎಸಿಪಿ) ದೆಹಲಿಯ ಸಹಾಯಕ ಪೊಲೀಸ್ ಆಯುಕ್ತರಾಗಿದ್ದು, ಪಿ. ಅರವಿಂದನ್ ಚೆಂಗಲ್ಪೇಟೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ.
ಅವಳಿ ಮಕ್ಕಳಿಗೆ ಬಾಲ್ಯದಲ್ಲಿ ಒಂದೇ ತೆರನಾದ ಬಟ್ಟೆ ಧರಿಸಿ ಹೆತ್ತವರು ಖುಷಿ ಪಡೋದು ಸಹಜ..ಆದ್ರೆ ಇಲ್ಲಿ ಐಪಿಎಸ್ ಅಧಿಕಾರಿಗಳಾಗಿ ಇಬ್ಬರು ಸಾಧಿಸಿ ತೋರಿಸುವುದು ಅಪರೂಪದ ಸಂಗತಿ ಎಂದು ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ರೆ, ಅಭಿವ್ಯಕ್ತಿ ಒಂದೇ! ಅದ್ಭುತ ಕ್ಲಿಕ್! ” ಐಪಿಎಸ್ ಅಧಿಕಾರಿಯಾದ ಸೆಲ್ವನ್ ನಾಗರತಿನಂ ಕಮೆಂಟ್ ಮಾಡಿದ್ದಾರೆ.
ಒಟ್ಟಾರೆ ಅವಳಿ ಸಹೋದರರು ಸಮವಸ್ತ್ರದಲ್ಲಿರುವ ಪೋಟೋ ಕಂಡು ನೆಟ್ಟಿಗರು ಕೊಂಡಾಡಿದ್ದಾರೆ.ಐಪಿಎಸ್ ಅಧಿಕಾರಿ ಅರವಿಂದಂ ಪಿ ಅವರ ಪೋಸ್ಟ್ಗೆ 10,000 ಕ್ಕೂ ಹೆಚ್ಚು ಲೈಕ್ಗಳು ಬಂದಿವೆ.