ನವದೆಹಲಿ, ಮಾ 03 (DaijiworldNews/DB): ಖಾರ್ಕಿವ್ ನಗರದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ರಾತ್ರಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಖಾರ್ಕಿವ್ ನಗರದಲ್ಲಿದ್ದು, ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷತೆ ವಹಿಸಬೇಕು. ಆವರನ್ನು ಅಲ್ಲಿಂದ ತೆರವು ಮಾಡಲು ಭಾರತ ನಡೆಸುವ ಎಲ್ಲಾ ಪ್ರಯತ್ನಗಳಿಗೆ ರಷ್ಯಾ ಸಹಕರಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಉಕ್ರೇನ್-ರಷ್ಯಾ ಸಮರ ಆರಂಭವಾದ ಮೇಲೆ ಇದು ಮೋದಿ-ಪುತಿನ್ ನಡುವಿನ ಎರಡನೇ ಸಂಭಾಷಣೆಯಾಗಿದೆ. ಮೊದಲ ದೂರವಾಣಿ ಸಂಭಾಷಣೆಯಲ್ಲಿ ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷರಲ್ಲಿ ಮೋದಿ ಮನವಿ ಮಾಡಿದ್ದರು.