ತಿರುವನಂತಪುರಂ, ಮಾ.02 (DaijiworldNews/SM): ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದಿಂದಾಗಿ ಅಲ್ಲಿರುವ ಹೊರ ರಾಷ್ಟ್ರದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಪೈಕಿ 3,500 ಕೇರಳಿಗರಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಕೇರಳಿಗರ ತಕ್ಷಣದ ಸ್ಥಳಾಂತರಕ್ಕಾಗಿ ವಿದೇಶಾಂಗ ಸಚಿವಾಲಯವು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿವರಗಳನ್ನು ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೇರಳದ ಸುಮಾರು 3,500 ಜನರು ಈಗಾಗಲೇ ನೋರ್ಕಾ ರೂಟ್ಸ್ ಕಂಟ್ರೋಲ್ ರೂಮ್ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎನ್ನುವುದು ಕೇರಳ ಸಿಎಂ ನೀಡಿರುವ ಮಾಹಿತಿ. ಕೇರಳದ ಎಲ್ಲಾ ನಾಲ್ಕು ವಿಮಾನ ನಿಲ್ದಾಣಗಳು ವಲಸಿಗರನ್ನು ಸ್ವೀಕರಿಸಲು ಸಿದ್ಧವಿದೆ ಎಂದು ಸಿಎಂ ತಿಳಿಸಿದ್ದಾರೆ.