ನವದೆಹಲಿ, ಮಾ.02 (DaijiworldNews/SM): ಉಕ್ರೇನ್ನ ಖಾರ್ಕಿವ್ ನಲ್ಲಿರುವ ಭಾರತೀಯರು ತಕ್ಷಣ ನಗರವನ್ನು ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಟ್ವಿಟರ್ ನಲ್ಲಿ ನೀಡಿದ ಸಲಹೆಯಲ್ಲಿ ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ತುರ್ತು ಖಾರ್ಕಿವ್ ನಗರ ತೊರೆಯುವಂತೆ ಸಲಹೆ ನೀಡಿದೆ. ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾಗೆ ಆದಷ್ಟು ಬೇಗ ತೆರಳಿ. ಆದಷ್ಟು ಶೀಘ್ರದಲ್ಲೇ ಇಲ್ಲಿನ ವಸಾಹತುಗಳನ್ನು ತಲುಪಬೇಕು ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.
ಮಂಗಳವಾರ ಖಾರ್ಕಿವ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ಭಾರತವು ನೆರೆಯ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ರೊಮೇನಿಯಾ ಮೂಲಕ ತನ್ನ ಪ್ರಜೆಗಳನ್ನು ಸ್ಥಳಾಂತರಿಸುತ್ತಿದೆ.