ನವದೆಹಲಿ, ಮಾ 01 (DaijiworldNews/HR): ಉಕ್ರೇನ್ ನಲ್ಲಿ ಕ್ಷಣ ಕ್ಷಣಕ್ಕೂ ಬಾಂಬ್, ಶೆಲ್ ದಾಳಿ ನಡೆಯುತ್ತಿದ್ದು, ರಷ್ಯಾದ ಶೆಲ್ ದಾಳಿಗೆ ಉಕ್ರೇನ್ನಲ್ಲಿದ್ದಂತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾರೆ ಘಟನೆ ವರದಿಯಾಗಿದೆ.
ಈ ಕುರಿತಂತೆ ಭಾರತೀಯ ರಾಯಬಾರ ಕಚೇರಿಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ರಷ್ಯಾ ಸೇನೆಯ ರಾಕೆಟ್ ದಾಳಿಯಿಂದಾಗಿ ಉಕ್ರೇನ್ ನಲ್ಲಿದ್ದಂತ ನವೀನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವುದಾಗಿ ಖಚಿತ ಪಡಿಸಿದೆ.
ನವೀನ್ ಇಂದು ಬೆಳಗ್ಗೆ ತಿಂಡಿ ತರಲು ಹೊರಗೆ ಬಂದಿದ್ದು, ಈ ವೇಳೆ ಶೆಲ್ ಬಾಂಬ್ ದಾಳಿಯಲ್ಲಿ ರಷ್ಯ ಸೇನೆ ಕಟ್ಟಡ ದ್ವಂಸ ಮಾಡಿದ್ದು ಕಟ್ಟಡದ ಬಳಿ ಇದ್ದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾನೆ.
ಇನ್ನು ಖಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ತನ್ನ ಸ್ನೇಹಿತರೊಂದಿಗೆ ವಾಸವಾಗಿದ್ದರು.