ಬೆಂಗಳೂರು, ಮಾ 01 (DaijiworldNews/HR): ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಎರಡನೇ ಹಂತದ ಪಾದಯಾತ್ರೆ ಬೆಂಗಳೂರು ನಗರಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಇನ್ನೂ 3 ದಿನ ಟ್ರಾಫಿಕ್ ಜಾಮ್ ಆಗಬಹುದು. ಹೀಗಾಗಿ ಬೆಂಗಳೂರು ಜನತೆಯ ಕ್ಷಮೆಯಾಚಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬೆಂಗಳೂರಿನ ಜನತೆ ಹಾಗೂ ರೈತರಿಗಾಗಿ ನಾವು ಹೋರಾಟ ನಡೆಸುತ್ತಿದ್ದು, ನಮ್ಮ ಪಾದಯಾತ್ರೆ ಬೆಂಗಳೂರು ನಗರಕ್ಕೆ ಎಂಟ್ರಿಕೊಟ್ಟಿದೆ. ಬೆಂಗಳೂರಿನಲ್ಲಿ ಇನ್ನೂ 3 ದಿನ ಟ್ರಾಫಿಕ್ ಜಾಮ್ ಆಗಬಹುದು. ಹೀಗಾಗಿ ಬೆಂಗಳೂರು ಜನತೆಯ ಕ್ಷಮೆಯಾಚಿಸುತ್ತೇನೆ ಎಂದರು.
ಇನ್ನು ಪಾದಯಾತ್ರೆಗೆ ಪಕ್ಷ ಬೇಧ ಮರೆತು ಸಹಕಾರ ಕೊಟ್ಟಿದ್ದಾರೆ. ಟೀಕೆಗಳನ್ನು ಉಪದೇಶವೆಂದು ಸಂತೋಷದಿಂದ ಸ್ವೀಕಾರ ಮಾಡುತ್ತೇವೆ. ಪಾದಯಾತ್ರೆ ಇಂದು ಕೆಂಗೇರಿಯಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.