ಕೋಲ್ಕತ್ತಾ, ಮಾ 01 (DaijiworldNews/HR): 'ಕಚ್ಚಾ ಬದಾಮ್' ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಅವರು 'ಕಚ್ಚಾ ಬದಾಮ್' ಹಾಡನ್ನು ಹಾಡಿ ವೈರಲ್ ಆಗಿದ್ದು, ಇದೀಗ ಹೊಸದಾಗಿ ಖರೀದಿಸಿದ್ದ ಕಾರ್ ಓಡಿಸಲು ಕಲಿಯುತ್ತಿದ್ದಾಗ ಅಪಘಾತವಾಗಿ ಎದೆಗೆ ಪೆಟ್ಟಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಭುವನ್ ಬಡ್ಯಾಕರ್ ಅವರ 'ಕಚಾ ಬದಮ್' ಹಾಡು ವೈರಲ್ ಆದ ನಂತರ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಭುವನ್ ಅವರು ಬೀರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಕಡಲೆಕಾಯಿ ಮಾರಾಟ ಮಾಡುವಾಗ ಖರೀದಿದಾರರನ್ನು ಆಕರ್ಷಿಸಲು ಈ ಹಾಡನ್ನು ರಚಿಸಿದ್ದು, ಅವರ ಹಾಡನ್ನು ನಂತರ ರೀಮಿಕ್ಸ್ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಯಿತು ಅದು 50 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.