ನವದೆಹಲಿ, ಫೆ 28 (DaijiworldNews/MS): ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟವರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಏಪ್ರಿಲ್ 1ರಿಂದ ಎಂಟು ಪಟ್ಟು ಹೆಚ್ಚಳ ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅದಿಸೂಚನೆ ಹೊರಡಿಸಿದೆ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಉಂಟಾಗುವಂತ ಸಾವು, ನೋವುಗಳ ಪರಿಹಾರದ ಮೊತ್ತವನ್ನು , 2019ರ ತಿದ್ದುಪಡಿಯಂತೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 161 ಅಡಿಯಲ್ಲಿ, ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಸಾವಿಗೆ ಪರಿಹಾರವನ್ನು 25,000 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ತೀವ್ರ ಗಾಯಗಳ ಪ್ರಕರಣಗಳಲ್ಲಿ, ಪರಿಹಾರವನ್ನು ರೂ.12,500 ರಿಂದ ರೂ.50,000 ಕ್ಕೆ ಹೆಚ್ಚಿಸಲಾಗಿದೆ.
ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 161ಕ್ಕೆ ತಿದ್ದುಪಡಿ ಮಾಡಿದ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019ರ ಸೆಕ್ಷನ್ 50 ಏಪ್ರಿಲ್ 1, 2022ರಿಂದ ಜಾರಿಗೆ ಬರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಫೆಬ್ರವರಿ 25ರಂದು ಅಧಿಸೂಚನೆ ಹೊರಡಿಸಿತ್ತು.