ಶಿವಮೊಗ್ಗ, ಫೆ 28 (DaijiworldNews/MS): ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಉದ್ವಿಗ್ನಗೊಂಡ ಗಲಭೆ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಸ್ಥಗಿತವಾಗಿದ್ದ ಶಾಲಾ- ಕಾಲೇಜುಗಳಿಗೆ ಫೆ.28 ರ ಸೋಮವಾರ ಪುನರಾರಂಭಗೊಂಡಿದೆ.
ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ಮಾಡಿದ್ದು , ಪರಿಸ್ಥಿತಿ ತಿಳಿಗೊಂಡ ಹಿನ್ನಲೆಯಲ್ಲಿ ನಾಳೆಯಿಂದ ಶಾಲಾ-ಕಾಲೇಜು ಪುನರಾರಂಭವಾಗಿದೆ.
ಶಿವಮೊಗ್ಗ ಜಿಲ್ಲಾಡಲಿತ ಸೆಕ್ಷನ್ 144 ಸಿಆರ್ಪಿಸಿ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಮಾರ್ಚ್ 4 ರವರೆಗೆ ವಿಸ್ತರಿಸಿದ್ದಾರೆ.