ರಾಮನಗರ, ಫೆ 27 (DaijiworldNews/KP): ಕಾವೇರಿ ನೀರು ಕನ್ನಡಿಗರ ಅಧಿಕಾರ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.
ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾವೇರಿ ನೀರಿನ ಪ್ರತಿ ಹನಿಯ ಮೇಲೂ ಕನ್ನಡಿಗರಿಗೆ ಹಕ್ಕಿದೆ, ಮೆಕೆದಾಟು ಅಧಿಕಾರಕ್ಕೆ ಯಾರಾದರು ಅಡ್ಡಗಲಾಗಿದ್ದರೆ ಅದು ಬೆಂಗಳೂರಿನಲ್ಲಿ ಕುಳಿತಿರುವ ಬಿಜೆಪಿ ಸರ್ಕಾರ ಮಾತ್ರ ಎಂದು ಕಿಡಿಕಾರಿದರು.
ಕಾವೇರಿ ನೀರು ನಮ್ಮ ಅಧಿಕಾರ. ಇಂದು ನಾವು ಹೊಸ ಇತಿಹಾಸ ಬರೆಯುವ ದಿನ ಎಂದು ಹೇಳಿದರು.
ಇನ್ನು ರೈತರು, ಯುವಕರು ಸೇರಿದಂತೆ ಪ್ರತಿಯೊಬ್ಬ ಈ ನಡಿಗೆಯಲ್ಲಿ ಸಾಗಿದರೆ ಕಾವೇರಿ ತಾಯಿಯೇ ಮುಂದೆ ದಾರಿ ಮಾಡಿಕೊಡಲಿದ್ದಾಳೆ ಎಂದರು.
ಇನ್ನು ರಾಮನಗರದಟಿ.ಆರ್.ಮಿಲ್ ಮೈದಾನದಿಂದ ಪಾದಾಯಾತ್ರೆ ಆರಂಭವಾಗಿದ್ದು, ಹಲವರು ಕಾಂಗ್ರೆಸ್ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.