ನವದೆಹಲಿ, ಫೆ 27 (DaijiworldNews/KP): ನನ್ನ ಪ್ರಕಾರ ಮಹಾರಾಷ್ಟ್ರದಲ್ಲಿ ಮಾತ್ರ ಆದಾಯ ಮತ್ತು ತೆರಿಗೆ ಇದೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆದಾಯ ಮತ್ತು ತೆರಿಗೆ ಇಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ವ್ಯಂಗ್ಯವಾಡಿದ್ದಾರೆ
ಮಹಾರಾಷ್ಟ್ರದ ಸಚಿವರು ಮತ್ತು ರಾಜಕೀಯ ನಾಯಕರ ಮೇಲಿನ ಐಟಿ ದಾಳಿಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ಇಲ್ಲಿ ಇರುವುದರಿಂದ ಕೇಂದ್ರೀಯ ಸಂಸ್ಥೆಗಳು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ, ಭಾರತದ ಉಳಿದ ಕಡೆಗಳಲ್ಲಿ ಕೆಲಸವಿಲ್ಲ, ಹಾಗಾಗಿ ಅಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದುವರೆಗೂ ಏಜೆನ್ಸಿಗಳು ಏನನ್ನೂ ಕಂಡುಹಿಡಿಯುವುದಿಲ್ಲ ಎಂದು ತಿಳಿದು ಕೇಂದ್ರವು ಹುಡುಕಾಟ ನಡೆಸುತ್ತಿದೆ ಎಂದು ಹೇಳಿದರು.
ಅಲ್ಲದೆ ಈ ಎಲ್ಲಾ ವಿಷಯಗಳನ್ನು ನಾವು ಅಷ್ಟೇ ಅಲ್ಲ ಸಾರ್ವಜನಿಕರೂ ನೋಡುತ್ತಿದ್ದಾರೆ. ಅವರು ಏನು ಹುಡುಕುತ್ತಿದ್ದಾರೆಂದು ಅವರೇ ಕಂಡುಕೊಳ್ಳಲಿ ಎಂದು ಹೇಳಿದ್ದಾರೆ.
ಇನ್ನು ಶುಕ್ರವಾರ ಮುಂಜಾನೆ, ಆದಾಯ ತೆರಿಗೆ ಇಲಾಖೆಯು ಶಿವಸೇನಾ ಕಾರ್ಪೊರೇಟರ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ್ ಜಾಧವ್ ಅವರ ನಿವಾಸದಲ್ಲಿ ಶೋಧ ನಡೆಸಿತ್ತು.