ಕಲಬುರಗಿ, ಫೆ 27 (DaijiworldNews/HR): ಒಬಿಸಿಗೆ ಅನ್ಯಾಯ ಆಗದಂತೆ ಚುನಾವಣೆ ಮಾಡಲು ನಿರ್ಧರಿಸಲಾಗಿದ್ದು, ಮೀಸಲಾತಿ ಬಗ್ಗೆ ಅಂತಿಮ ನಿರ್ಣಯ ಹೊರಬಿದ್ದ ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಒಬಿಸಿಗೆ ಅನ್ಯಾಯ ಆಗದಂತೆ ಮಾಡಲು ನಿರ್ಧರಿಸಿದ್ದು, ಈ ಬಗ್ಗೆ ಸಿಎಂ ಮತ್ತು ತಜ್ಞರ ಜತೆ ಚರ್ಚಿಸಿದ್ದೇವೆ ಎಂದರು.
ಇನ್ನು ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಅರ್ಥಹೀನ ಪಾದಯಾತ್ರೆ. ಮೇಕದಾಟು ಯೋಜನೆ ಪಾರ್ಟ್-2, ಇದು ಕಾಂಗ್ರೆಸ್ ಪಕ್ಷದ ಪಾರ್ಟ್-2 ಅಷ್ಟೆ. ಕಾಂಗ್ರೆಸ್ನವರಿಗೆ ಏನು ಮಾಡಬೇಕು, ಬಿಡಬೇಕು ಅಂತಾ ಗೊತ್ತಿಲ್ಲ. ಮೇಕೆದಾಟು ಯೋಜನೆ ಡಿಪಿಆರ್ ಮಾಡಿದ್ದು ಕುಮಾರಸ್ವಾಮಿ ಅವಧಿಯಲ್ಲಿ. ಅದಾದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದು ಜಾರಿ ಮಾಡಲು ಮುಂದಾಗಿದ್ವಿ. ಕಾಂಗ್ರೆಸ್ ಪಾದಯಾತ್ರೆ ಮಾಡೋದಕ್ಕೆ ನಮ್ಮದೇನೂ ಏನು ಅಭ್ಯಂತರ ಇಲ್ಲ. ಆದ್ರೆ ನೀವು ಸರ್ಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.