ನವದೆಹಲಿ, ಫೆ 27 (DaijiworldNews/KP): ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಭಾನುವಾರ ಹ್ಯಾಕ್ ಮಾಡಿದ್ದಾರೆ.
ಅಲ್ಲದೆ ಅವರ ಟ್ವಿಟರ್ ಖಾತೆಯಿಂದ ಉಕ್ರೇನ್ ಮತ್ತು ರಷ್ಯಾಗೆ ಬೆಂಬಲಿಸಿ ಕ್ರಿಪ್ಟೊಕರೆನ್ಸಿ ಹಾಗೂ ಬಿಟ್ ಕಾಯಿನ್ಗಳನ್ನು ದೇಣಿಗೆಗಳನ್ನು ಯಾಚಿಸುವ ಪೋಸ್ಷ್ ಅನ್ನು ಮಾಡಲಾಗಿದೆ.
ಉಕ್ರೇನ್ ಜನರಿಗೆ ಬೆಂಬಲ ನೀಡಿ, ಕ್ರಿಪ್ಟೊಕರೆನ್ಸಿ ಮೂಲಕ ದೇಣಿಕೆ ಸ್ವೀಕರಿಸಲಾಗುತ್ತಿದೆ. ಅಲ್ಲದೆ ಬಿಟ್ಕಾಯಿನ್ ಮತ್ತು ಎಥೆರಿಯಮ್ನಿಂದ ದೇಣಿಗೆ ನೀಡಬಹುದು ಎಂದು ಟ್ವೀಟ್ ಮಾಡಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಉಕ್ರೇನ್ ಪರವಾದ ಟ್ವೀಟ್ ಡಿಲಿಟ್ ಮಾಡಿ ರಷ್ಯಾ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿತ್ತು.
ಐಸಿಜಿ ಗ್ರೂಪ್ ನಿಂದ ಜೆ.ಪಿ.ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸೈಬರ್ ಸೆಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸದ್ಯ ಹ್ಯಾಕರ್ಗಳು ಪ್ರಕಟಿಸಿದ ಪೋಸ್ಟ್ಗಳನ್ನು ಡಿಲಿಟ್ ಮಾಡಲಾಗಿದೆ.