ನವದೆಹಲಿ, ಫೆ 27 (DaijiworldNews/HR): ಉಕ್ರೇನ್ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ಮೂರನೇ ವಿಶೇಷ ವಿಮಾನ ಸುಮಾರು 250 ಭಾರತೀಯರನ್ನು ಹೊತ್ತು ದೆಹಲಿಗೆ ಬಂದಿಳಿದಿದೆ.
ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮೂರು ವಿಶೇಷ ವಿಮಾನಗಳ ಮೂಲಕ 'ಆಪರೇಷನ್ ಗಂಗಾ' ಹೆಸರಲ್ಲಿ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಇನ್ನು ಈಗಾಗಲೇ ಎರಡು ವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಇದೀಗ ಏರ್ ಇಂಡಿಯಾದ ಮೂರನೇ ವಿಮಾನ ದೆಹಲಿಗೆ ಆಗಮಿಸಿದೆ.
250 ಭಾರತೀಯರನ್ನು ಏರ್ ಲಿಫ್ಟ್ ಮಾಡಿರುವ ವಿಶೇಷ ವಿಮಾನ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ.