ಪಾಟ್ನಾ, ಫೆ 27 (DaijiworldNews/HR): ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಮಿರ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದು ಕೊಲೆ ಮಡಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಸಂಜು ದೇವಿ ಎಂದು ಗುರುತಿಸಲಾಗಿದೆ.
ವಿಜಯ್ ಗೊಂಡ್ ಅವರನ್ನು ಸಂಜು ದೇವಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಪತಿಯು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಸಂಜು ಆಗಾಗ್ಗೆ ವಿರೋಧಿಸುತ್ತಿದ್ದಳು. ಇದರಿಂದ ದಿನವೂ ಪತ್ನಿ ಸಂಜುಗೆ ಥಳಿಸುತ್ತಿದ್ದ. ಇದರಿಂದ ಕೋಪಗೊಂಡ ಸಂಜು ತನ್ನ ತಾಯಿಯ ಮನೆಗೆ ಹೋಗಿದ್ದಳು. ಅದೇ ವೇಳೆಗೆ ಪತಿ ಕರೆಸಿಕೊಂಡ ಸಂಜು ಅತ್ತೆ ಮನೆಯಿಂದ ಅತ್ತಿಗೆ ಮನೆಗೆ ಬಂದಿದ್ದಳು. ಅದೇ ರಾತ್ರಿ ಚಾಪಕಲ್ ಬಳಿ ನೀರು ತರಲು ಹೋದ ಸಂಜು ದೇವಿ ತಲೆ ಕಡಿದು ಪತಿ ಕೊಲೆ ಮಾಡಿ ನಂತರ ಕೊಲೆಗಾರ ಸಾಕ್ಷ್ಯ ನಾಶಪಡಿಸಲು ಪತ್ನಿಯ ಶವವನ್ನು ಹರಿತವಾದ ಆಯುಧದಿಂದ ಹಲವಾರು ತುಂಡುಗಳನ್ನಾಗಿ ಎಸೆದಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪೋಷಕರಿಗೆ ಮಾಹಿತಿ ಸಿಕ್ಕಿತ್ತು. ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಇದೀಗ ಮೃತಳ ಕುಟುಂಬಸ್ಥರ ಹೇಳಿಕೆ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.