ಉತ್ತರ ಪ್ರದೇಶ, ಫೆ 27 (DaijiworldNews/HR): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಐದನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮುಕ್ತಾಯವಾಗಲಿದೆ.
12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ 692 ಅಭ್ಯರ್ಥಿಗಳು ಕಣದಲ್ಲಿದ್ದು, ಐದನೇ ಹಂತದಲ್ಲಿ ಉತ್ತರ ಪ್ರದೇಶ. ಸುಮಾರು 2.24 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ.
ಇನ್ನು ಇಂದು ಅಮೇಥಿ, ರಾಯ್ಬರೇಲಿ, ಅಯೋಧ್ಯೆ, ಸುಲ್ತಾನ್ಪುರ, ಚಿತ್ರಕೂಟ, ಪ್ರತಾಪ್ಗಢ, ಕೌಶಂಬಿ, ಪ್ರಯಾಗ್ರಾಜ್, ಬಾರಾಬಂಕಿ, ಬಹ್ರೈಚ್, ಶ್ರಾವಸ್ತಿ ಮತ್ತು ಗೊಂಡಾ ಸೇರಿದಂತೆ 12 ಜಿಲ್ಲೆಗಳಲ್ಲಿ ಒಟ್ಟು 61 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಉತ್ತರ ಪ್ರದೇಶ ವಿಧಾನಸಭೆಯ ಒಟ್ಟು 403 ಸ್ಥಾನಗಳ ಪೈಕಿ 292 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕೊನೆಯ ಎರಡು ಹಂತದ ಚುನಾವಣೆಗಳು ಮಾರ್ಚ್ 3 ಮತ್ತು ಮಾರ್ಚ್ 7 ರಂದು ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.