ಮುಂಬೈ, ಫೆ 26 (DaijiworldNews/HR): ಉಕ್ರೇನ್ ದೇಶದಲ್ಲಿದ್ದ 219 ವಿದ್ಯಾರ್ಥಿಗಳು ಮುಂಬೈ ವಿಮಾನದಲ್ಲಿ ಬಂದಿಳಿದಿದ್ದು, ಭಾರತೀಯ ವಿದ್ಯಾರ್ಥಿಗಳನ್ನ ರೊಮೇನಿಯಾದ ಬುಕಾರೆಸ್ಟ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ಸ್ಥಳಾಂತರ ಮಾಡಲಾಗಿದ್ದು, ಸದ್ಯ ಭಾರತಕ್ಕೆ ಬಂದಿಳಿದ್ದು ಅವರನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ವಾಗತಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬ್ಯಾಚ್ನ ಸ್ಥಳಾಂತರಿಸಿದವರನ್ನು ಸ್ವಾಗತಿಸಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದು, ಪ್ರತಿಯೊಬ್ಬ ಭಾರತೀಯನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಟ್ವಿಟರ್ನಲ್ಲಿ, ಗೋಯಲ್ ಅವರು ತಮ್ಮ ತಾಯ್ನಾಡಿಗೆ ಮರಳಿದ ರಾಷ್ಟ್ರೀಯರನ್ನು ಸ್ವಾಗತಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.