ಬೆಂಗಳೂರು, ಫೆ 26 (DaijiworldNews/HR): ಹಿಜಾಬ್ ಪ್ರಕರಣಕ್ಕೆ ಸಂಬಂಸಿದಂತೆ ಹೈಕೋರ್ಟ್ನಲ್ಲಿ ನಡೆದ 11 ದಿನಗಳ ಕಲಾಪವನ್ನು ನ್ಯಾಯಾಲಯದ ಅಧಿಕೃತ ಯುಟ್ಯೂಬ್ ಚಾನಲ್ನಲ್ಲಿ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಇದು ಭಾರತ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
ಈ ವರ್ಷದ ಮೊದಲ ದಿನದಿಂದಲೇ ನ್ಯಾಯಾಲಯದ ಕಲಾಪಗಳನ್ನು ಯೂಟ್ಯೂಬ್ ಮೂಲಕ ಲೈವ್ ಮಾಡುವುದನ್ನು ಹೈಕೋರ್ಟ್ ಕಡ್ಡಾಯಗೊಳಿಸಿತು.
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದ 11 ದಿನಗಳ ಕಲಾಪವನ್ನು ಕರ್ನಾಟಕ ಹೈಕೋರ್ಟ್ನ ಅಧಿಕೃತ ಯೂಟ್ಯೂಬ್ ಚಾನಲ್ನಲ್ಲಿ ಜಗತ್ತಿನ ವಿವಿಧೆಡೆಯಿಂದ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಚಂದಾದಾರರ ಸಂಖ್ಯೆ ಒಂದು ಲಕ್ಷ ದಾಟಿದೆ ಎಂದು ತಿಳಿದು ಬಂದಿದೆ.
ಇನ್ನು ಬೇರೆ ಯಾವ ಹೈಕೋರ್ಟ್ನ ಚಂದದಾರರ ಸಂಖ್ಯೆಯು ಒಂದು ಲಕ್ಷ ದಾಟಿಲ್ಲ. ಬಹುತೇಕ ಹೈಕೋರ್ಟ್ಗಳಲ್ಲಿ ಯೂಟ್ಯೂಬ್ ಲೈವ್ ಸ್ಟ್ರೀಮ್ ಇನ್ನಷ್ಟೇ ಆರಂಭವಾಗಬೇಕಿದ್ದು, ಹಿಜಾಬ್ ತರಗತಿಯಲ್ಲಿ ಧರಿಸಬಾರದಂತೆ ರಾಜ್ಯ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳನ್ನು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆ.ಎಂ.ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠ ಫೆ.10ರಿಂದ 25ರವರೆಗೆ 11 ದಿನಗಳ ಕಾಲ ಒಟ್ಟು 23.5 ಗಂಟೆ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ.
ಹಿಜಾಬ್ ವಿಚಾರಣೆಯನ್ನು ಫೆ.10ರಿಂದ ಆರಂಭಿಸಿದ್ದು, ಇಡೀ ಕಲಾಪವನ್ನು ಅರ್ಜಿದಾರರ ಒಪ್ಪಿಗೆಯೊಂದಿಗೆ ಯೂಟ್ಯೂಬ್ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಪೀಠವು ನಿರ್ಧರಿಸಿತ್ತು.