ತೆಲಂಗಾಣ,ಫೆ 26 (DaijiworldNews/HR): ತರಬೇತಿನಿರತ ವಿಮಾನವೊಂದು ಪತನವಾಗಿ ಮಹಿಳಾ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಮೃತಪಟ್ಟ ಘಟನೆ ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲದ ತುಂಗತ್ತುರಿ ಸಮೀಪ ಶನಿವಾರ ಸಂಭವಿಸಿದೆ.
ವಿಮಾನ ಕೆಳಗೆ ಬಿದ್ದ ಶಬ್ಧಕ್ಕೆ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ರೈತರು ಬೆಚ್ಚಿಬಿದ್ದಿದ್ದು, ಮಿಮಾನ ಬಿದ್ದ ತಕ್ಷಣ ದಟ್ಟ ಹೊಗೆ-ಬೆಂಕಿಯ ಜ್ವಾಲೆ ಕಂಡು ಬಂದಿದೆ ಎನ್ನಲಾಗಿದೆ.
ಕೃಷಿ ಭೂಮಿಯಲ್ಲಿನ ಹೈಟೆನ್ಶನ್ ವಿದ್ಯುತ್ ತಂತಿಗಳಿಗೆ ಹೆಲಿಕಾಪ್ಟರ್ ಸಂಪರ್ಕಕ್ಕೆ ಬಂದು ದುರಂತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ಸ್ಥಳದಲ್ಲೇ ಪೈಲಟ್ ಮತ್ತು ಟ್ರೈನಿ ಪೈಲಟ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.