ಬೆಂಗಳೂರು, ಫೆ 26 (DaijiworldNews/MS): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರನ್ನು ಹಾಡಹಗಲೇ ಹೊಡೆದು ಕೊಲ್ಲುವ 'ಯುಪಿ ಮಾಡೆಲ್' ಜಾರಿಯಾಗಿದೆ. ಹೆಣ ಬಿದ್ದರೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿ ಈಗ ಎಲ್ಲಿದೆ? ಎಂದು ಕಾಂಗ್ರೆಸ್ ಟೀಕಿಸಿದೆ.
ಕನ್ಯಾಡಿಯ ದಿನೇಶ್ (40) ಕೊಲೆಯಾದ ವ್ಯಕ್ತಿ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, " ಧರ್ಮಸ್ಥಳದಲ್ಲಿ ಹತ್ಯೆಯಾದ ದಲಿತ ಕಾರ್ಮಿಕ ದಿನೇಶ್ ವಿಚಾರದಲ್ಲಿ ಸರ್ಕಾರ ಮೌನವಾಗಿರುವುದೇಕೆ?ಕೊಲೆ ಮಾಡಿದವನು ಬಿಜೆಪಿ ಮುಖಂಡನೆಂದೇ? ಆರೋಪಿಯ ರಕ್ಷಣೆಗೆ ನಿಂತು ತಲೆಮರೆಸಿಕೊಳ್ಳುವ ವ್ಯವಸ್ಥೆ ಮಾಡಿದ್ದೇಕೆ? ಬಜರಂಗದಳದ ಗೂಂಡಾ ಎಂದೇ? ಬಿಜೆಪಿ ಆಡಳಿತದಲ್ಲಿ ದಲಿತರನ್ನು ಹಾಡಹಗಲೇ ಹೊಡೆದು ಕೊಲ್ಲುವ 'ಯುಪಿ ಮಾಡೆಲ್' ಜಾರಿಯಾಗಿದೆ" ಎಂದು ಆರೋಪಿಸಿದೆ.
"ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಯಾವ ಭಯವಿಲ್ಲದೆ ಹಾಡಹಗಲೇ ದಲಿತರನ್ನು ಥಳಿಸಿ ಹತ್ಯೆಗೈಯ್ಯಲಾಗುತ್ತದೆ ಎಂದರೆ ಕಾನೂನು ಸುವ್ಯವಸ್ಥೆ ಎಂಬುದು ಹಾಸ್ಯದ ವಿಷಯವಾಗಿದೆ ಅಲ್ಲವೇ? ಆರೋಪಿಯನ್ನು ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟು ರಕ್ಷಣೆ ಮಾಡಲಾಗಿದೆ ಎಂದರೆ ಕಾನೂನು ಬಿಜೆಪಿಗರ ಜೇಬಿನಲ್ಲಿರುವ ಕಡಲೆಬೀಜದಂತಾಗಿರುವುದು ಸ್ಪಷ್ಟ"ಎಂದು ಹೇಳಿದೆ
"ದಲಿತರನ್ನು ಹೊಡೆದು ಕೊಲ್ಲುವುದು ಬಿಜೆಪಿಯ ಧರ್ಮರಕ್ಷಣೆಯ ಭಾಗವೇ? ಬಿಜೆಪಿಯವರ ದೃಷ್ಟಿಯಲ್ಲಿ ದಲಿತರ ಜೀವಕ್ಕೆ ಬೆಲೆ ಇಲ್ಲವೇ?ಹೆಣ ಬಿದ್ದರೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿ ದಲಿತ ದಿನೇಶ್ ಹತ್ಯೆ ಪ್ರಕರಣದಲ್ಲಿ ಕಣ್ಮುಚ್ಚಿದೆ, ಆರೋಪಿಯ ರಕ್ಷಣೆಗೆ ನಿಂತಿದೆ. ಬಳಕೆಗೆ ಬರುವ ಹೆಣಗಳ ಬಗ್ಗೆ ಮಾತ್ರ ಬಿಜೆಪಿಗೆ ಆಸಕ್ತಿ"ಎಂದು ಟೀಕಿಸಿದೆ.
ಉಜಿರೆ: ಜಮೀನು ವಿವಾದ ಹಲ್ಲೆ, ಪುತ್ರನ ಸಾವಿನಲ್ಲಿ ಅನುಮಾನ - ತಾಯಿಯಿಂದ ದೂರು