ಬಸ್ತಿ, ಫೆ 26 (DaijiworldNews/KP): ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್ಪಿಯು ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್ಪಿ ಇನ್ನೂ ಪ್ರಸ್ತುತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸತ್ಯವನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ಅಮಿತ್ ಶಾ ತೋರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಮಾಜವಾದಿ ಪಕ್ಷವು, ‘ಬಿಎಸ್ಪಿಯು ಬಿಜೆಪಿಯ ಬಿ ಟೀಂ’ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು ನಮ್ಮ ಪಕ್ಷವು ಬಿಜೆಪಿಯ ಬಿ ಟೀಂ ಆಗಿದ್ದೇ ನಿಜವಾದರೆ, ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಜೊತೆ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದ್ದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಅತ್ಯಾಚಾರ, ಹಲ್ಲೆಗೆ ಗುರಿಯಾದ ದಲಿತರ ಮನೆಗೆ ಬೆಹೆನ್ಜೀ ಭೇಟಿ ನೀಡಿಲ್ಲ ಎಂದು ಈ ಮಾಧ್ಯಮಗಳು ಕೇಳುತ್ತಿವೆ. ಆದರೆ ಪ್ರಿಯಾಂಕಾ ಗಾಂಧಿಯಂತೆ ಸಂತ್ರಸ್ತರ ಮನೆಗೆ ಹೋಗಿ, ನಾಟಕವಾಡಲು ನಾನು ಯಾವುದೇ ಪಕ್ಷದ ಉಸ್ತುವಾರಿ ಅಥವಾ ಪ್ರಧಾನ ಕಾರ್ಯದರ್ಶಿ ಅಲ್ಲ ಎಂದು ವಾಗ್ದಾಳಿ ನಡಿಸಿದರು.