ಬೆಂಗಳೂರು,ಫೆ 25 (DaijiworldNews/HR): ಹಿಜಾಬ್ ವಿವಾದದ ಕುರಿತಂತೆ ನ್ಯಾಯಾಧೀಶರನ್ನು ನಿಂಧಿಸಿ, ಟ್ವಿಟ್ ಮಾಡಿರುವ ನ್ಯಾಯಾಂಗ ನಿಂಧನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಚೇತನ್ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಆ ದಿನಗಳ ಖ್ಯಾತಿಯ ನಟ ಚೇತನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿದಂತ ನಗರದ 40ನೇ ಎಸಿಎಂಎಂ ಕೋರ್ಟ್ ನ ನ್ಯಾಯಾದೀಶ ಮಧುಕರ್ ನೆಲಕುಂದ್ರೆ ಅವರು, ಚೇತನ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಹಿಜಾಬ್ ವಿವಾದ ಕುರಿತಂತೆ ಚೀತನ್ ಟ್ವಿಟ್ ಮಾಡಿದ್ದಂತ ಪೋಸ್ಟ್ ನಲ್ಲಿ ನ್ಯಾಯಾಧೀಶರನ್ನು ನಿಂದಿಸಲಾಗಿತ್ತು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರನ್ನು ಶೇಷಾದ್ರಿಪುಂರ ಪೊಲೀಸರು ಬಂಧಿಸಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ಕೂಡ ವಿಧಿಸಲಾಗಿತ್ತು.
ಇದೀಗ ಈ ಪ್ರಕರಣದಲ್ಲಿ ನಟ ಚೇತನ್ ಗೆ 40ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿದೆ.