ಬೆಂಗಳೂರು, ಫೆ 25 (DaijiworldNews/HR): ಗೋವುಗಳ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವಿಕೃತ ಯುವಕನೊಬ್ಬನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ದಾವಣಗೆರೆ ಮೂಲದ ವೆಂಕಟೇಶ್ (22) ಎಂದು ಗುರುತಿಸಲಾಗಿದೆ.
ಸಿಂಗಾಪುರ ಲೇಔಟ್ನ ಮುನಿ ಹನು ಮಂತಪ್ಪ ಎಂಬುವರಿಗೆ ಸೇರಿದ ಹಸುವಿನ ಜತೆ ಯುವಕ ಅಸಹಜ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುನಿ ಹನುಮಂತಪ್ಪ ಅವರ ಮನೆ ಮುಂಭಾಗದ ಸ್ಥಳದಲ್ಲಿಯೇ ಗೋವುಗಳಿಗೆ ಕೊಟ್ಟಿಗೆ ನಿರ್ಮಿಸಿಕೊಳ್ಳಲಾಗಿದ್ದು, ಫೆ. 19ರಂದು ರಾತ್ರಿ ವೇಳೆ ಆರೋಪಿ ವೆಂಕಟೇಶ್ ಗೋವುಗಳ ಜತೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅದನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅದರಿಂದ ಅಚ್ಚರಿಗೊಂಡ ಹನುಮಂತಪ್ಪ ಮರು ದಿನ ರಾತ್ರಿಯಿಡಿ ಕಾಯ್ದುಕೊಂಡು ಕುಳಿತಿದ್ದರು. ಆಗ ಕೊಟ್ಟಿಗೆಗೆ ಬಂದ ಆರೋಪಿ ಹಸುಗಳ ಜತೆ ವಿಕೃತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಇನ್ನು ಆರೋಪಿಯನ್ನು ಸ್ಥಳದಲ್ಲೇ ಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಹಾಗೂ ಜಾನುವಾರುಗಳ ಮೇಲೆ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.