ಬೆಂಗಳೂರು, ಫೆ 25 (DaijiworldNews/MS): ಸಿದ್ದರಾಮಯ್ಯ ಬಣಕ್ಕೆ ರಾಹುಲ್ ಗಾಂಧಿ ಶ್ರೀರಕ್ಷೆ, ಡಿಕೆಶಿಗೆ ಸೋನಿಯಾ ಗಾಂಧಿ ಬೆಂಬಲ ಎಂದು ಭುಜ ತಟ್ಟಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ಬಣಕ್ಕೆ ರಾಹುಲ್ ಗಾಂಧಿ ಶ್ರೀರಕ್ಷೆ, ಡಿಕೆಶಿಗೆ ಸೋನಿಯಾ ಗಾಂಧಿ ಬೆಂಬಲ ಎಂದು ಭುಜ ತಟ್ಟಿಕೊಳ್ಳುತ್ತಿದ್ದಾರೆ. ಹಾಗಾದರೆ ಉಳಿದ ನಾಯಕರ ಪಾಡೇನು? ರಾಜ್ಯದಲ್ಲೂ G23 ನಾಯಕರ ಬಣ ಸೃಷ್ಟಿಯಾಗುವುದೋ ಅಥವಾ ಅದೇ ಬಣಕ್ಕೆ ಸೇರಿಕೊಳ್ಳುತ್ತಾರೋ? ಎಂದು ರಾಹ್ಯ ಕಾಂಗ್ರೆಸ್ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.
ಹೈಕಮಾಂಡ್ ಬುಲಾವ್ ಮೇರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೇಲ್ಮನೆ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರು ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಭೆ ಕುರಿತಾಗಿ ವ್ಯಂಗ್ಯವಾಡಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ "ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಬಗ್ಗೆ ನೇತೃತ್ವದಲ್ಲಿ ನಡೆದ ರಾಷ್ಟೀಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಇಷ್ಟು ದಿನಗಳ ಕಾಲ ನನ್ನ ನೇತೃತ್ವದಲ್ಲೇ ಚುನಾವಣೆ ಎಂದು ಹೇಳುತ್ತಿದ್ದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇದಕ್ಕೆ ಒಪ್ಪಿಕೊಳ್ಳುತ್ತಾರೆಯೇ? ಎಂದು ಕುಹಕವಾಡಿದೆ.
ಮುಂದಿನ ಚುನಾವಣೆ ಎದುರಿಸಲು ಕಾಂಗ್ರೆಸ್ ಹೈಕಮಾಂಡ್, ಸಾಮೂಹಿಕ ನಾಯಕತ್ವ ಮತ್ತು ಚುನಾವಣೆ ತಂತ್ರ ಹಾಗೂ ಹೋರಾಟ ನಡೆಸುವುದಕ್ಕೆ ಹೈಕಮಾಂಡ್ ತಂಡ ಎಂಬ ಎರಡು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಕಾಂಗ್ರೆಸ್ ವರಿಷ್ಠರಿಗೆ ಪೂರ್ಣ ನಂಬಿಕೆ ಇಲ್ಲ ಎಂಬರ್ಥವಲ್ಲವೇ? ಎಂದು ಟೀಕಿಸಿದೆ.