ಜಾರ್ಖಂಡ್, ಫೆ 25 (DaijiworldNews/MS): ಜಾರ್ಖಂಡ್ನ ಜಮ್ತಾರಾದ ದಾಮೋದರ್ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ 14 ಜನರು ನಾಪತ್ತೆಯಾಗಿದ್ದಾರೆ. ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ನಿರ್ಸಾ ಪ್ರದೇಶದಿಂದ ಜಾಮ್ತಾರಾಕ್ಕೆ ದೋಣಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ದೋಣಿಯಲ್ಲಿ ಸುಮಾರು 18 ಮಂದಿ ಪ್ರಯಾಣಿಸುತ್ತಿದ್ದು, ಗುರುವಾರ ರಾತ್ರಿ 7 ಗಂಟೆಯ ಸುಮಾರಿಗೆ ಜಮ್ತಾರಾದ ವೀರ್ ಬೇಡಿಯ ಸೇತುವೆ ಬಳಿ ದೋಣಿ ಮಗುಚಿ ಬಿದ್ದಿದೆ.
ನಾಲ್ವರನ್ನು ರಕ್ಷಿಸಲಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಮಳೆಯೂ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡಿದೆ.