ಮುಂಬೈ, ಫೆ 25 (DaijiworldNews/MS): ರಾಷ್ಟ್ರೀಯ ಷೇರು ಮಾರುಕಟ್ಟೆಯ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಗುರುವಾರ ರಾತ್ರಿ ಬಂಧಿಸಿದೆ.
ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್ಎಸ್ಇ) ಹಗರಣದ ಸಂಬಂಧ ಎನ್ಎಸ್ಇನ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿದ್ದ ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸಲಾಗಿದೆ
ಆನಂದ್ ಸುಬ್ರಮಣಿಯನ್ ಮೊದಲು 2013 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ ಎಸ್ ಇ) ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ನೇಮಕಗೊಂಡಿದ್ದರು. ಆ ಬಳಿಕ 2015 ರಲ್ಲಿ ಎಂಡಿ ಚಿತ್ರಾ ರಾಮಕೃಷ್ಣ ಅವರು ಎನ್ ಎಸ್ ಇ ಯ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿ ಭಡ್ತಿ ನೀಡಿದರು.
ಹಿಮಾಲಯ ಪರ್ವತಗಳಲ್ಲಿ ನೆಲೆಸಿರುಸಿರುವ 'ಯೋಗಿ'ಯ ಪ್ರಭಾವದಿಂದಾಗಿ ಆನಂದ್ ಸುಬ್ರಮಣಿಯನ್ ಅವರ ನೇಮಕವಾಗಿದೆ ಎಂದು ಆರೋಪಿಸಲಾಗಿದೆ. 2016 ರಲ್ಲಿ ಅಕ್ರಮಗಳ ಆರೋಪಗಳು ಬಂದ ನಂತರ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು ಸುಬ್ರಮಣಿಯನ್ ತೊರೆದಿದ್ದರು.