ಬೆಂಗಳೂರು, ಫೆ 24 (DaijiworldNews/HR): ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು 11ನೇ ದಿನ ಇಂದು ಕೂಡ ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿದ್ದು, ಈ ವಾರದಲ್ಲಿಯೇ ವಾದ-ಪ್ರತಿವಾದ ಮುಗಿಸುವಂತೆ ಹೈಕೋರ್ಟ್ನ ತ್ರಿಸದಸ್ಯ ಪೂರ್ಣಪೀಠವು ತಿಳಿಸಿತ್ತು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನಾಳೆ ಒಂದು ದಿನಕ್ಕೆ ವಾದ ಮಂಡನೆಗೆ ಅವಕಾಶ ನೀಡಿ, ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.
ಇಂದು ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿಯವರನ್ನು ಒಳಗೊಂಡಂತ ತ್ರಿಸದಸ್ಯ ನ್ಯಾಯಪೀಠವು ಹಿಜಾಬ್ ಅನುಮತಿ ಕುರಿತಾದಂತ ಅರ್ಜಿಯ ವಿಚಾರಣೆಯನ್ನು ನಡೆಸಿದ್ದು, ಇಂದು ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು ಈಗಾಗೇ ಅರ್ಜಿದಾರರ ಪರ ವಕೀಲರು, ಸರ್ಕಾರದ ಪರ ಅಡ್ವಕೇಟ್ ಜನರಲ್ ತಮ್ಮ ತಮ್ಮ ನಿಲುವು ಮನವರಿಕೆ ಮಾಡಿದ್ದಾರೆ.
ಇನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನೊಳಗೊಂಡಂತ ತ್ರಿಸದಸ್ಯ ನ್ಯಾಯಪೀಠವು ನಾಳೆ ಒಂದು ದಿನ ವಾದ ಮಂಡನೆಗೆ ಅವಕಾಶ ನೀಡಿ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.