ಮಹಾರಾಷ್ಟ್ರ, ಫೆ 24 (DaijiworldNews/HR): ಚುನಾವಣಾ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜಕಾರಣಿಗಳ ವಿರುದ್ಧ 'ತಂತ್ರಗಳನ್ನು ಆಡಲು' ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕೇಂದ್ರ ಸರ್ಕಾರವು ಚುನಾವಣಾ ತಂತ್ರಗಳನ್ನು ಮಾಡುತ್ತಿದ್ದು, ಚುನಾವಣೆ ಬಂದಾಗಲೆಲ್ಲಾ ಎಲ್ಲಾ ಸಂಸ್ಥೆಗಳು ತಮ್ಮ ಕೆಲಸವನ್ನು ಪ್ರಾರಂಭಿಸುತ್ತವೆ ಎಂದರು.
ಇನ್ನು ಬಿಜೆಪಿ ಸರ್ಕಾರವು ಜನರಿಗೆ ನೀಡಿರುವ ಎಲ್ಲಾ ಭರವಸೆಗಳು ಮತ್ತು ಕನಸುಗಳು ಕೇವಲ ಕನಸಾಗಿಯೇ ಉಳಿದಿದೆ ಎಂದು ಆರೋಪಿದ್ದಾರೆ.
ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದ ನಂತರ ಅವರ ಹೇಳಿಕೆ ಬಂದಿದೆ.