ನವದೆಹಲಿ, ಫೆ 24 (DaijiworldNews/HR): ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಈ ಹಿಮಪಾತದಿಂದಾಗಿ ಕೆಲವು ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಕಿಶ್ತ್ವಾರ್ ಜಿಲ್ಲೆಯಿಂದ ಅನಂತನಾಗ್ಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವಾರ್ವಾನ್ ಗ್ರಾಮದ ಆರು ಜನರು ಹಿಮಪಾತದ ನಡುವೆ ನಾಪತ್ತೆಯಾಗಿದ್ದಾದ್ದು, ಅವರ ಪತ್ತೆಗೆ ಸೇನೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ಕಾಶ್ಮೀರದ ಬಯಲು ಪ್ರದೇಶದಲ್ಲಿ ಎರಡರಿಂದ ಮೂರು ಅಡಿ, ಮಧ್ಯ ಕಾಶ್ಮೀರದಲ್ಲಿ ಒಂದರಿಂದ ಒಂದೂವರೆ ಅಡಿ ಮತ್ತು ಉತ್ತರ ಕಾಶ್ಮೀರದಲ್ಲಿ ಆರು ಇಂಚುಗಳಿಂದ ಒಂದು ಅಡಿವರೆಗೆ ಹಿಮಪಾತವಾಗಿದೆ.
ಇನ್ನು ಶ್ರೀನಗರ ಸೇರಿದಂತೆ ಅನೇಕ ಕಡೆಗಳಲ್ಲಿ ವಿದ್ಯುತ್ ಟವರ್ ಗಳು ಉರುಳಿ ಬಿದ್ದಿರುವುದರಿಂದ ಇಡೀ ಕಾಶ್ಮೀರದ ದೀಪಗಳು ಪ್ರಸ್ತುತವಾಗಿದ್ದು, ಕಾಶ್ಮೀರದಿಂದ 35 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ವಿದ್ಯುತ್ ಟವರ್ಗಳು ಕುಸಿದಿದ್ದರಿಂದ ಸುಮಾರು 6 ವಾಹನಗಳು ಸಹ ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ.