ಮುಂಬೈ, ಫೆ 23 (DaijiworldNews/KP): ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬಂಧಿಸಿದೆ.
ಇಂದು ಮುಂಜಾನೆ 6 ಗಂಟೆಗೆ ಇಡಿ ಅಧಿಕಾರಿಗಳು ನವಾಬ್ ಅವರ ಮನೆಗೆ ತೆರಳಿದ್ದು, ಅಲ್ಲಿ ಸುಮಾರು ಒಂದು ಗಂಟೆ ವಿಚಾರಣೆಗೆ ಒಳಪಡಿಸಿ, ನಂತರ 7.30ರ ವೇಳೆಗೆ ಇಡಿ ಕಚೇರಿಗೆ ಅವರನ್ನು ಕರೆದೊಯ್ಯಲಾಯಿದು, 8.30ರಿಂದ ಮತ್ತೆ ವಿಚಾರಣೆ ನಡೆಸಿ ಬಂಧಿಸಲಾಯಿತ್ತು.
ಈ ಬೆಳವಣಿಗೆಯ ಬಗ್ಗೆ ಸ್ವತಃ ನವಾಬ್ ಅವರ ಕಚೇರಿ ಟ್ವೀಟರ್ ಮೂಲಕ ಖಚಿತಪಡಿಸಿದೆ, ಇಂದು ಬೆಳಗ್ಗೆ ಇಡಿ ತಂಡ ನವಾಬ್ ಸಾಹೇಬರ ಕಚೇರಿಗೆ ಬಂದು ಅವರನ್ನು ಜಾರಿ ನಿರ್ದೇಶನಾಲಯದ ವಾಹನದಲ್ಲಿಯೇ ಅವರ ಕಚೇರಿಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿತ್ತು.
ಇನ್ನು ನವಾಬ್ ಮಲಿಕ್ ಬಂಧನದ ಬಗ್ಗೆ ಮಾಹಿತಿ ಪಡೆದ ಎನ್ಸಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನವಾಬ್ ಅವರನ್ನು ವಿಚಾರಣೆ ನಡೆಸುತ್ತಿರುವ ಇಡಿ ಬಲ್ಲಾರ್ಡ್ ಪಿಯರ್ ಕಚೇರಿಯಿಂದ ಸ್ವಲ್ಪ ದೂರದಲ್ಲಿರುವ ಎನ್ಸಿಪಿ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರ ಗುಂಪು ಜಮಾಯಿಸಿದ್ದು, ಸದ್ಯ ಅವರನ್ನು ಬಂಧಿಸಿರುವ ಪ್ರದೇಶದಲ್ಲಿ ಉದ್ವಗ್ನ ವಾತಾವರಣ ಸೃಷ್ಟಿಯಾಗಬರದು ಎಂಬ ನಿಟ್ಟಿನಲ್ಲಿ ಇಡಿ ಕಚೇರಿಯ ಹೊರಗೆ ಬೆಂಗಾವಲು ಪಡೆ ಹಾಗೂ ಸಿಆತ್ಎಫ್ಯನ್ನು ನಿಯೋಜಿಸಲಾಗಿದೆ. ಹಾಗೂ ಇಡಿ ಕಚೇರಿಗೆ ಹೋಗುವ ಎಲ್ಲಾ ರಸ್ತೆಗಳನ್ನೂ ಮುಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಚಾರಣೆಯ ನಂತರ ಇಡಿ ಕಚೇರಿಯಿಂದ ಹೊರಬಂದ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್ , ಎಲ್ಲರನ್ನೂ ಹೋರಾಡುತ್ತೇನೆ, ಗೆಲ್ಲುತ್ತೇನೆ ಮತ್ತು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಸದ್ಯ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.