ಶಿವಮೊಗ್ಗ, ಫೆ 23 (DaijiworldNews/HR): ಭಾನುವಾರದಂದು ಹತ್ಯೆಯಾದ ಹಿಂದೂ ಸಂಘಟನೆ ಯುವಕ ಹರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತ ಹಲವೊಂದು ವಿಚಾರಗಳನ್ನು ಬಹಿರಂಗ ಪಡಿಸಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆಯಾಗುವುದಕ್ಕೂ ಮೊದಲೂ ಪದೇ ಪದೇ ಹರ್ಷನಿಗೆ ಇಬ್ಬರು ಹುಡುಗಿಯರು ಕರೆ ಮಾಡಿ ನಾನು ನಿಮ್ಮ ಸ್ನೇಹಿತರು ಎನ್ನುತ್ತಿದ್ದರು. ಈ ವೇಳೆ ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದಾನೆ. ಇವರು ಯಾರು ಎಂದು ಸ್ನೇಹಿತರಿಗೆ ಕೇಳಿದ್ದಾನೆ. ಇದಾದ ಬಳಿಕ ಸ್ನೇಹಿತರ ಜೊತೆ ತೆರಳಿದ್ದ ಹರ್ಷ ಕೆಲವೇ ಕ್ಷಣಗಳಲ್ಲಿ ಕೊಲೆಯಾಗಿದ್ದಾನೆ ಎಂದು ಸ್ನೇಹಿತ ಹೇಳಿಕೊಂಡಿದ್ದಾನೆ.
ಇನ್ನು ಕೊಲೆಯಾದ ಬಳಿಕ ಹರ್ಷನ ಮೊಬೈಲ್ ನಾಪತ್ತೆಗಿದ್ದು, ಮೊಬೈಲ್ ಎಲ್ಲಿದೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ.
ಮೊಬೈಲ್ ಆರೋಪಿಗಳ ಬಳಿ ಇದೆಯೇ? ಆರೋಪಿಗಳು ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ? ಸಹಾಯ ಕೇಳುವ ನೆಪದಲ್ಲಿ ಹುಡುಗಿಯರಿಂದ ಕರೆ ಮಾಡಿಸಿ ಬಲೆ ಬೀಸಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಮೂಡಿದೆ.
ಇದೀಗ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಂತೆ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.