ಬೆಂಗಳೂರು, ಫೆ 23 (DaijiworldNews/KP): ರಾಜಕೀಯ ಲಾಭಕ್ಕಾಗಿ ಅಧಿವೇಶನದಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಅಲ್ಲದೆ ವಾಸ್ತವವಾಗಿ ಸಚಿವರು ಹೇಳದೆ ಇರುವುದನ್ನು ಸೇರಿಸಿ ಹೋರಾಟ ನಡೆಸುತ್ತಿದ್ದೀರಿ, ಇದು ತಪ್ಪು ಇದನ್ನು ಜನ ಕೂಡ ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆ ವೇಳೆ ಮಾತನಾಡಿದ ಅವರು, ನೀವು ಈಗ ನಡೆಸುತ್ತಿರುವ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯವನ್ನು ಇಟ್ಟುಕೊಂಡೇ ಜನರ ಮುಂದೆ ಬನ್ನಿ, ಆದರೆ ನಾವು ಅಭಿವೃದ್ಧಿ ಮಂತ್ರದೊಂದಿಗೆ ಬರುತ್ತೇವೆ. ಆಗ ಜನರೇ ತೀರ್ಪು ಹೇಳುತ್ತಾರೆ ಎಂದು ವಿರೋಧ ಪಕ್ಷಕ್ಕೆ ಸವಾಲು ಹಾಕಿದರು.
ಇನ್ನು ಆಡಳಿತ ಪಕ್ಷವಾಗಂತ್ತು ಕಾಂಗ್ರೆಸ್ ಉಳಿದಿಲ್ಲ. ಆದರೆ ಈ ಅಧಿವೇಶನದಲ್ಲಿ ತಮ್ಮ ವರ್ತನೆಯಿಂದ ಪ್ರತಿಪಕ್ಷವಾಗುವ ಅರ್ಹತೆಗಳನ್ನೂ ಕಳೆದುಕೊಂಡಂತಾಗಿದೆ ಎಂದಿದ್ದಾರೆ.