ನವದೆಹಲಿ, ಫೆ 23 (DaijiworldNews/HR): ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ಧ ಭೀತಿ ಹಿನ್ನೆಲೆ ಉಕ್ರೇನ್ನಿಂದ 242 ಭಾರತೀಯ ವಿದ್ಯಾರ್ಥಿಗಳು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಸಂಜೆ ಬಂದಿಳಿದಿದ್ದಾರೆ ಎಂದು ತಿಳಿದು ಬಂದಿದೆ.
ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಯುದ್ಧ ಭೀತಿ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಭಾರತೀಯರು ವಾಪಾಸ್ ಬರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು,ಭಾರತವು ಡ್ರೀಮ್ಲೈನರ್ B-787 ವಿಮಾನವನ್ನು ನಿಯೋಜಿಸಿದ್ದು, ಇದರಡಿಯಲ್ಲಿ ಉಕ್ರೇನ್ನ ಖಾರ್ಕಿವ್ನಿಂದ ದೆಹಲಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಇನ್ನು ಉಕ್ರೇನ್ನಿಂದ ಹಿಂದಿರುಗಿದ ರಾಜಸ್ಥಾನದ ವಿದ್ಯಾರ್ಥಿಗಳ ಪ್ರಯಾಣದ ವೆಚ್ಚವನ್ನು ಭರಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸಲು ರಾಜಸ್ಥಾನ ಸರ್ಕಾರವು ತಯಾರಿ ನಡೆಸುತ್ತಿದ್ದು, ಸದ್ಯ ಎಂಟು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ರಾಜಸ್ಥಾನ ಭವನದಲ್ಲಿ ಉಳಿಯಲು ತಿಳಿಸಲಾಗಿದೆ.
ಉಳಿದಂತೆ ಏರ್ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಹಿಂತಿರುಗಿದ ಹಲವಾರು ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ವರದಿಯಾಗಿದೆ.