ಕೊಚ್ಚಿ, ಫೆ 23 (DaijiworldNews/HR): ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ(74 ) ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಕೆಪಿಎಸಿ ಲಲಿತಾ ಮೃತಪಟ್ಟಿರುವ ಸುದ್ದಿಯನ್ನು ಮಲಯಾಳಂ ಸಿನೆಮಾ ಕಲಾವಿದರ ಸಂಘದ ಕಾರ್ಯದರ್ಶಿ ಇಡವೇಲ ಬಾಬು ಧೃಡಪಡಿಸಿದ್ದಾರೆ.
ಲಲಿತಾ ಅವರು ರಂಗಭೂಮಿಯಿಂದ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರು 50 ವರ್ಷಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದರು.
ಇನ್ನು ಸುಮಾರು 500 ಕ್ಕೂ ಹೆಚ್ಚು ಸಿನೆಮಾಗಳಲ್ಲಿನಟಿ ಕೆಪಿಎಸಿ ಲಲಿತಾ ಅಭಿನಯಿಸಿದ್ದಾರೆ.