ಬೆಂಗಳೂರು, ಫೆ. 22 (DaijiworldNews/SM): ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ವಿಧಾನಸಭೆ ಅಧಿವೇಶನ ಮೊಟಕುಗೊಂಡಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸದಸ್ಯರ ನಡೆಯ ವಿರುದ್ಧ ಅಸಮಾಧಾಣ ಹೊರಹಾಕಿದ್ದಾರೆ. ಇನ್ನೂ ಮಾರ್ಚ್ 4ರಂದು ಬಜೆಟ್ ಮಂಡಿಸಲು ತೀರ್ಮಾನ ಕೈಗೊಂಡಿದ್ದೇವೆ. ಅದಕ್ಕಾಗಿ ಪೂರಕ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಜೆ.ಪಿ.ನಡ್ಡಾ ರವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಮಾಹಿತಿ ತೆಗೆದುಕೊಂಡು ಮಾತಾಡ್ತಾನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಹೈಕೋರ್ಟ್ ನಲ್ಲಿ ಹಿಜಾಬ್ ವಿಚಾರ ವಿಚಾರಣೆ ನಡೆಯುತ್ತಿದೆ. ಮಧ್ಯಂತರ ಆದೇಶ ಮಾಡಿದೆ ಅದನ್ನ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಿರಿಯರು. ಅವರ ಅನುಭವ ಎಲ್ಲಿ ಹೊಯಿತು ಎಂದು ಪ್ರಶ್ನೆ ಮಾಡಿದ ಸಿಎಂ, ರಾಜಕಾರಣದ ಮುಸುಕು ಅವರ ಮುಖದ ಮೇಲೆ ಬಿದ್ದಿದೆ. ಖಂಡಿತವಾಗಿ ಮುಂದೆ ಅವರಿಗೆ ರಾಜಕೀಯ ಭವಿಷ್ಯ ಇಲ್ಲ. ಆಡಳಿತ ಪಕ್ಷವಾಗಿ ಅವರು ವಿಫಲವಾಗಿದ್ರು, ಜನ ಅವರನ್ನ ತಿರಸ್ಕರಿಸಿದ್ರು, ಈಗ ವಿಪಕ್ಷವಾಗಿಯೂ ಅವರು ವಿಫಲವಾಗಿದ್ದಾರೆ ಎಂದರು.