ಪಣಜಿ, ಫೆ 22 (DaijiworldNews/KP): ಹಿಂದೂ ವಿರೋಧಿ ಮೂಲಭೂತವಾಧಿಗಳು ಹರ್ಷನನ್ನು ಕೊಂದಿದ್ದಾರೆ, ಇದು ಖಂಡನಿಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಶಿವಮೊಗ್ಗದ ಬಜರಂಗದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಇತರರಿಗಿಂತ ತಮ್ಮನ್ನು ತಾವು ಹೆಚ್ಚು ಅರ್ಹರು ಎಂದು ಪರಿಗಣಿಸುವುದು ಕೆಲವು ಜನರ ವಿಶೇಷ ಹಕ್ಕಾಗಿದೆಯೇ.? ಎಂದು ಹೇಳಿದರು.
ಇನ್ನು ಹಿಂದೂ ವಿರೋಧಿ ಮೂಲಭೂತವಾಧಿಗಳು ರಾಷ್ಟ್ರೀಯವಾದಿ ಹರ್ಷನನ್ನು ಕೊಂದಿದ್ದಾರೆ. ಈ ಅಮಾನುಷ ಕೃತ್ಯವನ್ನು ಖಂಡಿಸುತ್ತೇನೆ ಎಂದು ಹೇಳಿದರು
ಅಲ್ಲದೆ ಹರ್ಷ ಅವರ ಕುಟುಂಬಸ್ಥರಿಗೆ ಈ ಮೂಲಕ ನಾನು ಸಾಂತ್ವನ ಹೇಳುತ್ತೇನೆ ಎಂದು ಅವರು ಹೇಳಿದರು