ಬೆಂಗಳೂರು, ಫೆ 22 (DaijiworldNews/KP): ರೇಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಮಾತಿನ ಮಲ್ಲಿ ಆರ್.ಜೆ. ರಚನಾ(39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ತೊರೆದಿದ್ದ ಅವರು ಮನೆಯಲ್ಲೇ ಏಕಾಂಗಿಯಾಗಿದ್ದು ಡಿಪ್ರೆಷನ್, ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಹಿನ್ನಲೆಯಲ್ಲಿ ಹೃದಾಯಘಾತಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ
ರೇಡಿಯೋ ಮಿರ್ಚಿಯಲ್ಲಿ ಆರ್.ಜೆ ರಚನಾ ಕಾರ್ಯಕ್ರಮ ಬಂದರೆ ಸಾಕು ಎಲ್ಲರ ಕಿವಿ ಆವರ ಮಾತಿನತ್ತ ಹೋಗುತ್ತಿತ್ತು. ಇನ್ನೂ ನಾರ್ಮಲ್ ಲೈಫ್ನಲ್ಲೂ ಸದಾ ಹಸನ್ಮುಖಿಯಾಗಿದ್ದ ರಚನಾಗೆ ಹೃದಯಾಘಾತವಾಗಿರುವುದು ಹಲವರಿಗೆ ಅತೀವ ಬೇಸರ ನೀಡಿದೆ.