ನವದೆಹಲಿ, , ಫೆ 22 (DaijiworldNews/MS): ಭಾರತದಿಂದ ದುಬೈಗೆ ಪ್ರಯಾಣಿಸುವ ವಿಮಾನ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿಆರ್ ಟಿ ಪಿಸಿಆರ್ ಪರೀಕ್ಷೆಗೆ (RT-PCR) ಒಳಗಾಗಬೇಕಾಗಿಲ್ಲ.
ಸಾಂದರ್ಭಿಕ ಚಿತ್ರ
"ದುಬೈಗೆ ಪ್ರಯಾಣಿಸಲು ಭಾರತದಿಂದ ಹೊರಡುವ ವೇಳೆ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಕ್ಷಿಪ್ರ ಪಿಸಿಆರ್ ಪರೀಕ್ಷೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ" ಎಂದು ಏರ್ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೂ , ದುಬೈಗೆ ತೆರಳುವ ಪ್ರಯಾಣಿಕರು ನಿರ್ಗಮನಕ್ಕೆ 48 ಗಂಟೆಗಳ ಮೊದಲು ಕೋವಿಡ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿದೆ ಅಲ್ಲದೆ ದುಬೈಗೆ ಆಗಮಿಸಿದ ನಂತರ ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.