ಬೆಂಗಳೂರು, ಫೆ 22 (DaijiworldNews/MS): ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸದ ಕಾರಣ ವಿಧಾನಸಭೆ ಕಲಾಪವನ್ನು ಮಾ.4ಕ್ಕೆ ಮುಂದೂಡಲಾಗಿದೆ. ಕಾಂಗ್ರೆಸ್ ಗದ್ದಲದ ನಡುವೆಯೂ ಸಿಎಂ ಬಸವರಾಜ ಬೊಮ್ಮಾಯಿ ಮಾರ್ಚ್ 4ಕ್ಕೆ ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದರು.
ಅಧಿವೇಶನದ ಆರಂಭದಿಂದಲೂ ಸಚಿವ ಈಶ್ವರಪ್ಪರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ವಿಧಾನಸೌಧಲ್ಲಿ ಅಹೊರಾತ್ರಿ ಧರಣಿ ನಡೆಸುತ್ತಲೇ ಇದ್ದರು.ಮಂಗಳವಾರ ಬೆಳಗ್ಗೆಯೂ ಗದ್ದಲ ಮುಂದುವರಿದಿತ್ತು. ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ಕೈವಾಡವಿದೆ ಎಂಬುದಾಗಿ ಆರೋಪಿಸಿದಂತ ಬಿಜೆಪಿ ನಾಯಕರ ವಿರುದ್ಧ ಸದನದಲ್ಲಿ ಭಾವಿಗಿಳಿದು ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಲವು ಬಾರಿ ಮನವಿ ಮಾಡಿದರೂ ಪ್ರತಿಪಕ್ಷ ಕಾಂಗ್ರೆಸ್ ಸ್ಪಂದಿಸಲಿಲ್ಲ.
ಈ ಮಧ್ಯ ಸದನದಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾರ್ಚ್.4ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಸ್ಪೀಕರ್ ಅನುಮತಿಯನ್ನು ಕೋರಿದರು. ಸ್ಪೀಕರ್ ಒಪ್ಪಿಗೆ ಸೂಚಿಸಿದರು. ಅಲ್ಲದೇ ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ವಂದನಾ ನಿರ್ಣಯ ಅಂಗೀಕಾರದ ಬಳಿಕ, ಬಳಿಕ, ಕಾಂಗ್ರೆಸ್ ಸದಸ್ಯರ ಗದ್ದಲ-ಕೋಲಾಹಲದಿಂದಾಗಿ ಸದನ ಮುಂದೂಡುವುದು ಅನಿವಾರ್ಯವಾಗಿದೆ ಎಂದ ಸ್ಪೀಕರ್, ಮಾ.4ಕ್ಕೆ ಸದನ ಮುಂದೂಡಿರುವುದಾಗಿ ಪ್ರಕಟಿಸಿದರು.