ಬೆಂಗಳೂರು, ಫೆ 22 (DaijiworldNews/MS): ಹಿಜಾಬ್ ಹಾಗೂ ಬೇರೆ ಯಾವುದೇ ಕಾರಣ ಮುಂದಿರಿಸಿ ಪರೀಕ್ಷೆ ತಪ್ಪಿಸಿಕೊಂಡರೆ, ಅವರಿಗೆ ಬೇರೆ ಅವಕಾಶ ನೀಡುವುದಿಲ್ಲ. ಹಿಂದೂ ಮಕ್ಕಳಿಗೂ ಬೇರೆ ಅವಕಾಶವಿಲ್ಲಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಪರೀಕ್ಷೆ ಬೇಕೆಂದರೆ ಹಿಜಾಬ್, ಕೇಸರಿ ತೆಗೆದು ಪರೀಕ್ಷೆ ಬರೆಯಲಿ ಬೇರೆ ಅವಕಾಶ ನೀಡಲಾಗುವುದಿಲ್ಲ. ಹಿಜಾಬ್ ವಿವಾದವಾಗಿ ಹೈಕೋರ್ಟ್ ಆದೇಶವಿದೆ. ಆದರೆ ಅದನ್ನೂ ಕೂಡಾ ಕೆಲವರು ವಿರೋಧಿಸಿದ್ದಾರೆ. ಇದಕ್ಕೆ ಪರವಾಗಿ ಕಾಂಗ್ರೆಸ್ ನವರು ಮಾತನಾಡುತ್ತಾರೆ. ಇದಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ನಡೆದ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಕರ್ಫ್ಯೂ ಜಾರಿಗೊಳಿಸಿದ ಹಿನ್ನಲೆಯಲ್ಲಿ ಇಂದು ಶಾಲೆಗಳು ಪ್ರಾರಂಭಿಸಿಲ್ಲ. ನಾಳೆಯಿಂದ ಯಥಾಸ್ಥಿತಿ ಕಾಯ್ದುಕೊಂಡು ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಡಿಸಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.