ಬೆಂಗಳೂರು, ಫೆ 22 (DaijiworldNews/KP): ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗೋ ರಕ್ಷಣೆ ಮಾಡುವ ಹಿಂದೂ ಯುವಕರನ್ನು ಹತ್ಯೆ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಆಧಿಕಾರಕ್ಕೆ ಬಂದಿದೆ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಹರ್ಷ ಕೊಲೆ ಪ್ರಕರಣವನ್ನು ಎನ್ ಐಎ ಮೂಲಕ ತನಿಖೆ ನಡೆಸುವಂತೆ ಎಂದು ಒತ್ತಾಯಿಸಿದರು.
ಇನ್ನು ಮುಸಲ್ಮಾನ ಗೂಂಡಾಗಳು ನಮ್ಮ ಸಜ್ಜನ ಕಾರ್ಯಕರ್ತನನ್ನು ಕೊಲೆ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ಕೊಲೆಯಾದ ಸಮಯದಲ್ಲಿ ಎಸ್ ಪಿ ಗೆ ಕರೆ ಮಾಡಿದ್ದೆ, ಮುಸ್ಲಿಂಮರೇ ಕೊಲೆ ಮಾಡಿದ್ದಾರೆಂದು ಅವರು ಮಾಹಿತಿ ನೀಡಿದ್ದರು. ಅಲ್ಲದೆ ಸುತ್ತಮುತ್ತಲಿನ ಜನ ಕೂಡ ಅದೇ ಮಾತನ್ನು ಹೇಳಿದ್ದರು. ಹೀಗಾಗಿ ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳು ಎನ್ನುವ ಮಾತನ್ನು ಹೇಳಿದ್ದೆ, ಆದರೆ ಆ ಮಾತು ಈಗ ಸತ್ಯವೂ ಆಗಿದೆ ಎಂದರು.
ಇನ್ನು ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರೆಲ್ಲಾ ಮುಸ್ಲಿಂರು. ಈಗಲಾದರೂ ಕೊಲೆ ಮಾಡಿದ್ದು ಮುಸ್ಲಿಂರು ಎನ್ನುವುದನ್ನು ಅವರು ಒಪ್ಪಿಕೊಳ್ಳುತ್ತಾರೆಯೇ?' ಎಂದು ಪ್ರಶ್ನಿಸಿದರು.