ಬೆಂಗಳೂರು, ಫೆ 21 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸತತ 7 ದಿನದ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆದಿದ್ದು, ಅರ್ಜಿಯ ವಿಚಾರಣೆಯನ್ನು ಮತ್ತೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.
ಸತತ 7 ದಿನಗಳಿಂದ ಹಿಜಾಬ್ ಅನುಮತಿ ಕೋರಿ ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಾಮೂರ್ತಿ ರಿತುರಾಜ್ ಆವಸ್ತಿ ಒಳಗೊಂಡ ತ್ರಿಸದಸ್ಯ ಪೂರ್ಣ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ.
ಈಗಾಗಲೇ ಅರ್ಜಿದಾರರ ಪರ ವಾದ ಮಂಡನೆಯ ಬಳಿಕ ಇಂದು ಮತ್ತೆ ಪುನಾರಂರಭಗೊಂಡ ಅರ್ಜಿಯ ವಿಚಾರಣೆ ವೇಳೆ, ನ್ಯಾಯಪೀಠದ ಮುಂದೆ ಸರ್ಕಾರದ ಪರ ಅಡ್ವಕೇಜ್ ಜನರಲ್ ವಾದ ಮಂಡನೆ ಮಾಡಿದ್ದು, ರಾಜ್ಯ ಸರ್ಕಾರದ ವಾದ ಆಲಿಸಿದಂತ ನ್ಯಾಯಪೀಠವು, ಅರ್ಜಿಯ ವಿಚಾರಣೆಯನ್ನು ಮತ್ತೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.
ಇನ್ನು ಇಂದು ಹೈಕೋರ್ಟ್ ನಲ್ಲಿ ಮಧ್ಯಾಹ್ನ 2.30ಕ್ಕೆ ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಆರಂಭಿಸಿ, ಹೈಕೋರ್ಟ್ ಪೂರ್ಣ ಪೀಠದ ಮುಂದೆ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ಮಧ್ಯಸ್ಥಿಕೆದಾರನ ಪರವಾಗಿ ಪ್ರಸ್ತಾಪಿಸುತ್ತಾರೆ. ಈ ವೇಳೆ ಸಿಜೆ ಇದೀಗ ನ್ಯಾಯಾಲಯವು ಯಾವುದೇ ಮಧ್ಯಸ್ಥಿಕೆದಾರನನ್ನು ಕೇಳುವುದಿಲ್ಲ ಮತ್ತು ಪ್ರತಿವಾದಿಗಳ ವಾದಗಳ ನಂತರ ಅಗತ್ಯವಿದ್ದರೆ ಅವರ ಸಹಾಯವನ್ನು ಕೋರುತ್ತದೆ ಎಂದು ಹೇಳಿದರು.