ಚೇಲಕ್ಕರ, ಫೆ 21 (DaijiworldNews/MS): ಸಾಕು ನಾಯಿಯನ್ನು ಸಜೀವವಾಗಿ ದಹನ ಮಾಡಿದ ಕೇರಳದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೇಲಕ್ಕರದ ಚಕ್ಕನಪಾಡಿ ಮೂಲದ ಪುರುಷೋತ್ತಮನ್ (47) ಎಂಬಾತನ ವಿರುದ್ಧ ಸಾಕು ನಾಯಿಯನ್ನು ಕೊಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ನಾಯಿಯೂ ಕುತ್ತಿಗೆ ಪಟ್ಟಿ ತುಂಡರಿಸಿ ಹೊರಗೆ ಹೋಗುತ್ತಿರುವ ಬಗ್ಗೆ ಪುರುಷೋತ್ತಮನ್ ಅವರ ನೆರೆಹೊರೆಯವರು ಆಗಾಗ್ಗೆ ದೂರು ನೀಡುತ್ತಿದ್ದರು. ಇದಲ್ಲದೆ ಸಾಕು ನಾಯಿ ಆತನಿಗೆಯೇ ಕಚ್ಚಿದ್ದು ಇದರಿಂದ ಕೆರಳಿ ನಾಯಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ನಿರ್ದಯವಾಗಿ ಹೊಡೆದ ನಂತರ ಜೀವಂತವಾಗಿ ಬೆಂಕಿ ಹಚ್ಚಿದ್ದು, ಅಸಹಾಯಕತೆಯಿಂದ ಓಡುತ್ತಿರುವುದನ್ನು ನೋಡಿದ ನಾಯಿಯನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನಾಯಿಯನ್ನು ಮನೆ ಆವರಣದಲ್ಲೇ ಹೂತು ಹಾಕಲಾಗಿತ್ತು. ಇತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ