ಬೆಂಗಳೂರು, ಫೆ 21 (DaijiworldNews/KP): ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವವನು, ತಪ್ಪಿತಸ್ತರು ಯಾರೇ ಇರಲಿ, ಯಾವುದೇ ಸಂಘಟನೆ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಜರಂಗದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮಗಳೊಂಡಿಗೆ ಮಾತನಾಡಿದ ಅವರು, ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವವನು, ತಪ್ಪಿತಸ್ತರು ಯಾರೇ ಇರಲಿ, ಯಾವುದೇ ಸಂಘಟನೆ ಇದ್ದರೂ ಕೂಡ ಆರೋಪಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಇಂತಹ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಅಲ್ಲದೆ ಇಂತಹ ವಿಚಾರದಲ್ಲಿ ಪಕ್ಷದ ಹೆಸರು ಹೇಳಬಾರದು ಎಂದರು.
ಈಶ್ವರಪ್ಪ ಹೇಳಿಕೆಗೆ ಉತ್ತರಿಸಿದ ಅವರು, ಮೊದಲು ತಪ್ಪತಸ್ತರು ಯಾರು ಎಂದು ಪತ್ತೆ ಮಾಡಿ, ನಂತರ ಕಾಂಗ್ರೆಸ್, ಎಸ್ಡಿಪಿಐ ಎಂದು ಹೇಳಿ ಎಂದರು.
ಇನ್ನು ಆರೋಪಿಗಳು ಯಾರೇ ಆದರೂ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
ಅಧಿವೇಶನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸದನದಲ್ಲಿ ಬಿಟ್ ಕಾಯಿನ್, ಬೇರೆ ಬೇರೆ ವಿಚಾರ ಚರ್ಚೆ ಮಾಡಬಹುದಿತ್ತು. ಆದರೆ ಬಿಜೆಪಿಯಿಂದ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಿದೆ. ಅದಕ್ಕಾಗಿ ನಾವು ಧರಣಿ ಮಾಡುತ್ತಿದ್ದೇವೆ ಎಂದರು.