ಉನ್ನವೋ, ಫೆ 21 (DaijiworldNews/MS): ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಪ್ರಚಾರಕ್ಕೆ ತೆರಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಮುಖಂಡನ ಕಾಲಿಗೆ ಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಉನ್ನಾವೋ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು . ಈ ವೇಳೆ ಬಿಜೆಪಿಯ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್ ಅವರಿಗೆ ಶ್ರೀರಾಮನ ವಿಗ್ರಹವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.
ಕಟಿಯಾರ್ ಅವರು ವಿಗ್ರಹವನ್ನು ನೀಡಿದ ನಂತರ, ಕೆಳಗೆ ಬಾಗಿ ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿಲು ಮುಂದಾದರು. ಈ ವೇಳೆ ಬೇಡ ಎಂದ ಪ್ರಧಾನಿ, ಬಿಜೆಪಿಯ ಉನ್ನಾವ್ ಜಿಲ್ಲಾಧ್ಯಕ್ಷರಿಗೆ ಅವರ ಪಾದಗಳನ್ನು ಮುಟ್ಟಬೇಡಿ ಎಂದು ವಿನಂತಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್ ಅವರು ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.